• Facebook
  • Twitter
  • Instagram
  • LinkedIn
  • YouTube

ಬದಲಾವಣೆಯನ್ನು ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು

ಸಂಸ್ಥಾಪಕರ ಸಂದೇಶ 

ಅಣ್ಣಾಮಲೈ ಕೆ.

ಮಾಜೀ ಐ ಪಿ ಎಸ್ ಅಧಿಕಾರಿ | ಮುಖ್ಯ ಸೇವಕ – ವೀ ದ ಲೀಡರ್ಸ್

ನಮ್ಮ ಸಮಾಜಕ್ಕೆ ನಮ್ಮಿಂದಾಗುವ ಕೊಡುಗೆ ನೀಡುವ ಮೂಲಕ ಶ್ರೇಷ್ಠ ದೇಶ ಕಟ್ಟುವ ಗುರಿಯೊಂದಿಗೆ ಸಮಾನ ಮನಸ್ಕ ವ್ಯಕ್ತಿಗಳು ಸೇರಿಕೊಂಡು ಈ ಸಂಘಟನೆಯನ್ನು ಪ್ರಾರಂಭಿಸಲಾಗಿದೆ.ಇದನ್ನು ಸಾಧಿಸಲು ಪ್ರಾಮಾಣಿಕ ಸಂಭಾಷಣೆ,ಮುಕ್ತ ಸಂವಾದ ಹಾಗು ನಾವು ಬಯಸುವ ಬದಲಾವಣೆ ನಮ್ಮಿಂದಲೇ ಪ್ರಾರಂಭಿಸುವ ಸಂಸ್ಕೃತಿಯನ್ನು ಹುಟ್ಟುಹಾಕುವ ಗುರಿಯನ್ನು ನಾವು ಇರಿಸಿಕೊಂಡಿದ್ದೇವೆ.ಭ್ರಷ್ಟಾಚಾರ,ಹೊಣೆಗಾರಿಕೆಯ ಕೊರತೆ,ಶೂನ್ಯ ಪ್ರಭುದ್ಧ ನಾಯಕತ್ವದ ಜೊತೆಗೆ ನಮ್ಮ ರಾಷ್ಟ್ರೀಯತೆಗೆ ನಿರಾಶಾದಾಯಕತೆಯನ್ನು ಜೋಡಿಸುತ್ತಿರುವುದು ನಮ್ಮ ಶಾಪವಾಗಿ ಪರಿಣಮಿಸಿದೆ.

ಗ್ರಾಮೀಣ ಭಾಗಗಳಲ್ಲಿ ಬದುಕುತ್ತಿರುವ ದೊಡ್ಡ ಪ್ರಮಾಣದ ಪ್ರತಿಭೆಗಳಿಗೆ ತಮ್ಮನ್ನು ಅಭಿವ್ಯಕ್ತಿ ಪಡಿಸಿಕೊಳ್ಳಲು ಸೂಕ್ತವೇದಿಕೆ ಲಭಿಸುತ್ತಿಲ್ಲ. ತುಂಬಾ ಸಮಯಗಳಿಂದ ಅವರ ಧ್ವನಿ ಕೇಳಿಸದೆ ದುರ್ಬಲವಾಗುತ್ತಿದೆ.ಇಂದಿನ ಅಭಿವೃದ್ಧಿಯ ಪಥ ಸಿರಿವಂತ ಹಾಗು ಬಡವರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸುತ್ತಲಿದೆ.ಈಗಿನ ಬೆಳವಣಿಗೆಯ ಪಥವನ್ನು ಆದಷ್ಟು ಬೇಗ ಸರಿದಾರಿಗೆ ತರದಿದ್ದಲ್ಲಿ ಸರಕಾರಗಳ ಸದುದ್ದೇಶದ ಹೊರತಾಗಿಯು ಇತ್ತೀಚಿನ ದಶಕಗಳ ಬೆಳವಣಿಗೆ ನಿರರ್ಥಕವಾಗಲಿದೆ.ಅತ್ಯಂತ ಆಶ್ಚರ್ಯಕರ ವಿಷಯ ಏನೆಂದರೆ ಭ್ರಷ್ಟಾಚಾರಾದ ಜೊತೆಗೆ ಜನರು ಹೊಂದಿಕೊಂಡು ಹೋಗುವುದನ್ನು ಜೀವನ ವಿಧಾನ ಎನ್ನುವಂತೆ ರೂಢಿಸಿಕೊಂಡಿದ್ದಾರೆ.ಜೊತೆಗೆ ರಾಜಕೀಯ ಕಛೇರಿಗಳಲ್ಲಿ ನಾಯಕತ್ವಕ್ಕೆ ಬೇಕಾದ ಪರಿಮಿತಿ ಕೆಳಮಟ್ಟದಲ್ಲಿರುವುದರಿಂದ ಅನಪೇಕ್ಷಿತ ವ್ಯಕ್ತಿಗಳು ಅಧಿಕಾರ ಪಡೆಯಲು ಸಾಧ್ಯವಾಗುತ್ತಿದೆ.

ನಮ್ಮ ಬಗ್ಗೆ 

ನಮ್ಮ ಸಮಾಜವನ್ನು ರೂಪಿಸುವುದರಲ್ಲಿ ಹಾಗೂ ದೇಶವನ್ನು ಶ್ರೇಷ್ಠಗೊಳಿಸುವುದರಲ್ಲಿ ನಮ್ಮ ಕೊಡುಗೆ ನೀಡುವ ಗುರಿಯೊಂದಿಗೆ ಸಮಾನ ಮನಸ್ಕರು ಪ್ರಾರಂಭಿಸಿದ ಸಂಘಟನೆ ಇದು.ಇದನ್ನು ಸಾಧಿಸಲು,ಪ್ರಾಮಾಣಿಕ ಸಂಭಾಷಣೆ,ಮುಕ್ತ ಸಂವಾದ, ಹಾಗು ನಾವು ಬಯಸುವ ಬದಲಾವಣೆ ನಮ್ಮಿಂದಲೇ ಪ್ರಾರಂಭಿಸುವ ಸಂಸ್ಕೃತಿಯನ್ನು ಹುಟ್ಟುಹಾಕುವ ಗುರಿಯನ್ನು ನಾವು ಇರಿಸಿಕೊಂಡಿದ್ದೇವೆ.

ಕೇವಲ ಮಾತನಾಡುವುದರಿಂದ ಪ್ರಯೋಜನ ವಿಲ್ಲ. ಪುಟ್ಟದಾಗಿಯಾದರು ಕಾರ್ಯರೂಪಕ್ಕೆ ತರುವ ಪ್ರಯತ್ನ ಪ್ರಾರಂಭಿಸಬೇಕಿದೆ. ನಿಸ್ಸಂಶಯವಾಗಿ ಸರಿಯಾದ ದಿಕ್ಕಿನತ್ತ ಮುನ್ನಡೆಸುವ ಮೂಲಕ ದೇಶವನ್ನು ಎತ್ತರಕ್ಕೇರಿಸುವಲ್ಲಿ ನಮ್ಮ ಪ್ರಯತ್ನ ಮಾಡಲಿದ್ದೇವೆ. “ನವೀನ” ಭಾರತದ ಆಕಾಂಕ್ಷೆಗಳನ್ನು ವ್ಯಾಖ್ಯಾನಿಸುವಾಗ ಸ್ಪಷ್ಟವಾಗಿ ನಾವು ಮೂರು ಕ್ಷೇತ್ರಗಳಿಗೆ ಪ್ರವೇಶಿಸಲು ಬಯಸುತ್ತೇವೆ.

೧.ಕೌಶಲ್ಯ- ಮೊದಲನೇ ಹಂತದಲ್ಲಿ ಉದ್ಯೋಗ ಪಡೆಯುವದರಿಂದ ಎರಡನೆಯ ಹಂತದ ಉದ್ಯೋಗ ಸೃಷ್ಟಿಯವರೆಗೆ.

೨.ಅಭಿವೃದ್ಧಿಗಾಗಿ ಸಂವಾದ 

೩.ಸಾವಯವ ಕೃಷಿ-ನಿಯಂತ್ರಿತವಾಗಿ ಅಗತ್ಯಗಳೊಂದಿಗೆ ಬದುಕುವುದರೊಂದಿಗೆ ಅಭಿವೃದ್ಧಿಯ ಮಾದರಿಯನ್ನು ಬದಲಾಯಿಸುವುದು.

 

ನಲ್ಲಿ ಅಣ್ಣಾಮಲೈ ಕೆ ಭಾಷಣ

ವಿ ದಿ ಲೀಡರ್ಸ್ ಫೌಂಡೇಶನ್ ತಮಿಳುನಾಡಿನ ಕರೂರಿನಲ್ಲಿ ಪ್ರಾರಂಭವಾಗುತ್ತದೆ.

 

ನಮ್ಮ ಗುರಿ

  • ೧.ಸ್ವಯಂಸೇವಕತೆಯ ಪ್ರವೃತ್ತಿಗೆ ಹಾದಿ ಸುಲಭಗೊಳಿಸುವುದು.

  • ೨.ಸಕಾರಾತ್ಮಕ ಬದಲಾವಣೆಯ ಪ್ರತಿನಿಧಿಯಾಗಲು ವ್ಯಕ್ತಿಗಳನ್ನು ಸಕ್ರಿಯರಾಗಿಸುವುದರ ಜೊತೆಗೆ ಹುರಿದುಂಬಿಸುವುದು.

  • ೩.ಸೇವೆಗಳನ್ನು ತಲುಪಿಸಲು ಸಮುದಾಯಗಳನ್ನು ಸಮರ್ಥವಾಗಿ ತೊಡಗಿಸಿಕೊಳ್ಳಲು ಸಂಸ್ಥೆಗಳನ್ನು ಸಜ್ಜುಗೊಳಿಸುವುದು.

  • ೪.ಸುಸ್ಥಿರ ಜೀವನ ಮಾರ್ಗವನ್ನು ಪ್ರೋತ್ಸಾಹಿಸಲು.

ನವೀನ ವಿಷಯಗಳನ್ನು(ಅಪ್ ಡೇಟ್ಸ ಗಳಿಗಾಗಿ) ತಿಳಿಯಲು ನೋದಾಯಿಸಿ

About
Engage
Others
Collaborate

 Copyright © 2020 We The Leaders Foundation. All rights reserved.